Sunday 3 April 2016

ಇದು ಶಿಕ್ಷಣ ಇಲಾಖೆಯ ಅವಾಂತರ


ವಿದ್ಯಾರ್ಥಿಗಳ ಗೋಳಿಗೆ ಬೆಲೆಯಿಲ್ಲ, ಸರ್ಕಾರದ ಅವಾಂತರಕ್ಕೆ ಕೊನೆಯಿಲ್ಲ...
ಚಾಳಿಯಾಗಿದೆ ಸಮಸ್ಯೆಯ ಸಮಸ್ಯೆ...
ಪ್ರತಿವರ್ಷದ ಸೋರಿಕೆಯ ಅಧ್ವಾನ ಈ ವರ್ಷವೂ ಮುಂದುವರಿದಿದೆ...
ಶಾಪಿಂಗ್ ಮಾಲ್‍ಗಳಾಗಿವೆ ಖಾಸಗಿ ಶಿಕ್ಷಣ ಸಂಸ್ಥೆಗಳು...


           ಪ್ರತಿ ಬಾರಿ ಪತ್ರಿಕಾಗೋಷ್ಠಿ ಕುಳಿತುಕೊಂಡಾಗಲೂ ಮಾನ್ಯ ಶಿಕ್ಷಣ ಸಚಿವರಿಂದ ನಮ್ಮಂತ ಪತ್ರಿಕಾ ಮಿತ್ರರು ಕೇಳುವುದು ಇದೇ ಮಾತು...
“ವಿದ್ಯಾರ್ಥಿಗಳಲ್ಲಿ ಸದ್ಭಾವನೆ ಮೂಡಿಸುವ ಮತ್ತು ಅವರನ್ನು ಉತ್ತಮ ನಾಯಕರನ್ನಾಗಿಸುವ, ಶಿಕ್ಷಣ ಒದಗಿಸುವ, ವಿಚಾರದಲ್ಲಿ ಯಾವುದೇ ರಾಜಿ ಇಲ್ಲ...”
“ಶಾಲೆ ಆರಂಭವಾಗುವುದಕ್ಕೆ ಮುನ್ನವೇ ಪಠ್ಯ ಪುಸ್ತಕಗಳನ್ನು ಓದಗಿಸುವುದಕ್ಕೆ ಮೊದಲ ಆದ್ಯತೆ ನೀಡುತ್ತಿದ್ದೇವೆ...”
“ ರಾಜ್ಯದಲ್ಲಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರದ ಅನುಧಾನಕ್ಕೆ ಒಳಪಡಿಸಿದ್ದು, ಸಮಿತಿ ರಚಿಸಿ ಮುಂದಿನ ಕ್ರಮ ಕೈಗೊಳ್ಳುಲಾಗುತ್ತದೆ”
“ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲೂ ಸಾಧಿಸುತ್ತಿದ್ದೇವೆ, ಇದೊಂದು ಹೊಸ ರೀತಿಯ ಕ್ರಾಂತಿ ಎಂದರೂ ತಪ್ಪಿಲ್ಲ. ಅಕ್ರಮ, ಭ್ರಷ್ಟತೆ, ಡೊನೇಷನ್ ಹಾವಳಿ ಇತ್ಯಾದಿಗಳ ಬಗ್ಗೆ ಅತೀವ ಗಮನ ಇಟ್ಟಿದ್ದೇವೆ”
“ಪರೀಕ್ಷಾ ವಿಷಯದಲ್ಲಿ ಈ ಬಾರಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದೇವೆ ಯಾವ ರೀತಿಯ ನಕಲಿಗೂ ಅವಕಾಶವಿಲ್ಲ”..
 ............ಆದರೆ..!
           ಮೇಲ್ಕಂಡ ಯಾವ ಮಾತೂ ನೂರಕ್ಕೆ ನೂರು ಫಾಲೋ ಆಗಿದ್ದು ನಾನಂತೂ ನೋಡಿಲ್ಲ... ಹಾಗಾದ್ರೆ ಶಿಕ್ಷಣ ಸಚಿವರು, ಅವರ ಕೈಕೆಳಗಿರುವ ಉನ್ನತ ಅಧಿಕಾರಿಗಳು ಏನು ಮಾಡುತ್ತಿದ್ದಾರೆ!? ಶಿಕ್ಷಣ ಕ್ಷೇತ್ರ ಬಿಟ್ಟು, ನೀವು ಹಾಕಿಕೊಂಡಿರುವ ಪ್ಲಾನ್‍ಗಳನ್ನು ಬಿಟ್ಟು ಬೇರ್ಯಾವ ಘನಂಧಾರಿ ಕೆಲಸ ನಿಮ್ಮನ್ನು ಸೆಳೆಯುತ್ತಿದೆ ಮೊದಲು ಉತ್ತರವೀಯಿರಿ ನೋಡೋಣ..!
ಇನ್ನೂ ಎಷ್ಟು ಅಂತ ಸಹಿಸಿಕೊಳ್ಳಬೇಕು ನಾವು!??
          ಒಂದು ಕಡೆ ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಷನ್ ಹಾವಳಿ, ಇನ್ನೊಂದು ಕಡೆ ಶಿಕ್ಷಕರ ವೇತನ ಹೆಚ್ಚಳಕ್ಕಾಗಿ ಪ್ರತಿಭಟನೆ, ಮತ್ತೊಂದು ಕಡೆ ಕನ್ನಡ-ಇಂಗ್ಲೀಷ್ ಎನ್ನುವ ಭಾಷೆಯ ನಡವಳಿಯಲ್ಲಿ ಶಾಲಾ ಫೀಸ್‍ಗಳ ಅಟ್ಟಹಾಸ ಇವಿಷ್ಟನ್ನೂ ದಾಟಿ ಮುಂದೆ ಹೋದರೆ ಪರೀಕ್ಷಾ ನಕಲು, ಪ್ರಶ್ನೆ ಪತ್ರಿಕೆಗಳ ಸೋರಿಕೆ... ಇದೊಂಥರ ಚಾಳಿಯಾಗಿ ಬಿಟ್ಟಿದೆ ಎನಿಸುತ್ತದೆ. ಪ್ರತಿ ವರ್ಷವೂ ಮತ್ತೆ ಮತ್ತೆ ಮರುಕಳಿಸುವ ಈ ಸಮಸ್ಯೆಗಳು ವಿದ್ಯಾರ್ಥಿಗಳ ಮನಸ್ಸಿಗೆ ಎಷ್ಟು ಪರಿಣಾಮ ಬೀರುವುದೆಂದು ಯಾರಿಗೂ ತಿಳಿದಿಲ್ಲ. ಪರೀಕ್ಷಾ ವಿಚಾರ ತೆಗೆದುಕೊಂಡರೆ, ಪ್ರತ್ಯೇಕ ಪರೀಕ್ಷಾ ಮಂಡಳಿ, ಅದಕ್ಕೆ ಸೂಕ್ತ ಸಿಬ್ಬಂದಿ, ಸಮರ್ಪಕ ಸೌಲಭ್ಯವಿದ್ದರೂ ಇಂಥ ಅಧ್ವಾನಗಳು ಏಕೆ ಮರುಕಳಿಸುತ್ತವೆ ಎನ್ನುವುದು ಪ್ರಶ್ನಾರ್ಹವಾಗಿದೆ!?. ವರ್ಷದಂತೆ ಈ ಬಾರಿಯೂ ಕೂಡ ದ್ವಿತೀಯ ಪಿಯು ರಸಾಯನಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಮೊನ್ನೆ ಮೊನ್ನೆ ಮರು ಪರೀಕ್ಷೆಯೂ ನಡೆಯಿತು. ಎಲ್ಲಾ ಆದ ಬಳಿಕ ಮರುಪರೀಕ್ಷೆಯಲ್ಲಿ ಯಾವ ಸೋರಿಕೆಯೂ ಆಗಿಲ್ಲ, ಕ್ಷಮೆ ಇರಲಿ ಮುಂದೆ ಈ ರೀತಿಯ ತಪ್ಪುಗಳು ನಡೆಯುವುದಿಲ್ಲ, ಎಂದು ಸರ್ಕಾರ ಸ್ಫಷ್ಟವಾಗಿ ಅರುಹಿ ತಣ್ಣಗಾಗಿದೆ ಹಾಗಾದರೆ ಈ ಹಿಂದಿನ ವರ್ಷಗಳಲ್ಲಿ ನಡೆದಿದ್ದಾಗ ನೀವಂದುಕೊಂಡ ಧ್ಯೇಯಗಳೇನು!? ಸ್ವಲ್ಫ ನಮಗೂ ತಿಳಿಸಿ... ಬಹುಶಃ ಮುಂದಿನ ವರ್ಷವೂ ಇದೇ ಡೈಲಾಗ್ ಮರುಬಳಕೆಯಾಗಬಹುದೇನೋ ಯಾರು ಬಲ್ಲರು ನಿಮ್ಮ ಸೋರಿಕೆಯ ಪರಾಕ್ರಮ. ಇದು ಇಲಾಖೆಗಳ ಬೇಜವಾಬ್ಧಾರಿಯೋ!?, ಅಧಿಕಾರಿಗಳ ನಿಷ್ಕಾಳಜಿಯೋ!?, ಗೊತ್ತಿಲ್ಲ...ಆದರೆ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಂತೂ ನಿಜ.
ನಮ್ಮಲ್ಲಿರುವ ಸಮಸ್ಯೆಗಳು ಇಂದು ನಿನ್ನೆಯದಲ್ಲ ಎಷ್ಟು ಸಿಲ್ಲಿ ಸಿಲ್ಲಿಯ ಸಮಸ್ಯೆಗಳೆಂದರೆ ಸೋಷಿಯಲ್ ಮೀಡಿಯಾದಲ್ಲಿ ಯಾರೋ ಮೊನ್ನೆ ಮೊನ್ನೆ ಒಂದು ಪೋಸ್ಟ್ ಮಾಡಿದ್ದರು ಅದನ್ನು ಓದಿ ನನಗಂತೂ ನಗು ತಡೆಯಲಾಗಲಿಲ್ಲ.., ನೀವೂ ಓದಿ ಒಮ್ಮೆ ನಕ್ಕು ಬಿಡಿ..,
1. “ನಮ್ಮ ಕಾಲದಲ್ಲೆಲ್ಲಾ ಚಿgತೆ ನೊಡೋಕೆ ಶಾಲೆಯಿಂದ ‘ಝೂ’ಗೆ ಟ್ರಿಪ್ ಹೋಗ್ತಾ ಇದ್ವು..,”
ಈಗ ಕಾಲ ಮುಂದುವರಿದಿದೆ.., ಬದಲಾವಣೆ ಕಂಡಿದೆ... ಅದಕ್ಕಾಗಿ..,
“ಇದೀಗ ಮಕ್ಕಳನ್ನೇ ನೊಡೋಕೆ ಚಿರತೆಯೇ ಸ್ಕೂಲಿಗೆ ಟ್ರಿಪ್ ಹೊಡಿತಾ ಇದೆ...”

2. “ವಿಬ್ಲಯಾರ್ ಶಾಲೆ ಸೇರಲು ಬಂದ ಚಿರತೆಯ ಅಡ್ಮಿಶನ್‍ಗೆ ನಕಾರ...
ಇಂಗ್ಲೀಷ್ ಮೀಡಿಯಂ ಸ್ಕೂಲ್‍ನಲ್ಲಿ ಓದಬೇಕೆಂಬ ಚಿgತೆಯ ಕನಸು ಭಗ್ನ...”

3. “ಹೆಚ್ಚಿನ ಡೊನೆಷನ್ ಕೇಳಿದ್ದಕ್ಕೆ ಆಕ್ರೋಶÀಗೊಂಡ ಚಿgತೆ..,
 ಶಾಲೆ ಸಿಬ್ಬಂದಿ ಸೇರಿ ಹಲವರ ಮೇಲೆ ದಾಳಿ...”

         ನೋಡಿ ಮುಂದೆ ಈ ರೀತಿ ಆದರೂ ಆಗಬಹುದು. ಸಿದ್ಧಾಂತಗಳನ್ನು ಎಲ್ಲಾ ಅಧಿಕಾರಿಗಳು ಬರೆಯುತ್ತಾರೆ ಆದರೆ ಅದನ್ನು ಫಾಲೋ ಮಾಡುವುದಿಲ್ಲ ಅಷ್ಟೇ. ಅದೇ ನಮ್ಮ ದೊಡ್ಡ ಸಮಸ್ಯೆ...ಮೊದಲೆಲ್ಲಾ ಮಕ್ಕಳು ಶಾಲೆಗೆ ಹೋಗೋದೆ ಕಷ್ಟ ಆಗಿತ್ತು. ಈಗೀಗ ಶಾಲೆಗೆ ಕಳಿಸೋದೆ ಕಷ್ಟ ಆಗಿದೆ...ಅಂತೂ -ಇಂತೂ ಕಷ್ಟ ಪಟ್ಟು ಶಾಲೆಗೆ ಕಳುಹಿಸಿದೀವಿ ಅಂದ್ಕೊಳ್ಳಿ ಈ ರೀತಿ ಸಮಸ್ಯೆಗಳು!!. ಹಿಂದೆ ಆಗಿದ್ದು ಆಯ್ತು ಮರೆತ್ವಿ ಎನ್ನುವಾಗಲೇ ಮೊನ್ನೆ ಮೊನ್ನೆ ಪರೀಕ್ಷಾ ನಕಲು ಹಾಗೂ ಸೋರಿಕೆಯ ಕರ್ಮಕಾಂಡ ಮತ್ತೇ ಶಿಕ್ಷಣ ಇಲಾಖೆಯ ಬೇಜಾವ್ಧಾರಿತನವನ್ನು ಎತ್ತಿ ಹಿಡಿದಿದೆ.
ಸಚಿವರೆ.., ಇನ್ನಾದರೂ ಒಂದಿಷ್ಟು ಸಮಯವನ್ನು ಮೀಸಲಿಟ್ಟು ಮೆಲ್ಗಾಣಿಸಿದ ಸಮಸ್ಯೆಗಳಿಗೆ ಸೂಕ್ತ ಕ್ರಮಗಳನ್ನು ಕೈಗೆತ್ತಿಕೊಳ್ಳಿ ಸಮಸ್ಯೆಗಳ ಗೊಂದಲದಲ್ಲಿ ಶಿಕ್ಷಣಕ್ಕಿರುವ ಮೌಲ್ಯ ಹೊರಟು ಹೋದರೆ ಸಮಾಜದ ಗತಿ ಏನಾಗಬಹುದೋ ಹೇಳತೀರದು. ಇದಕ್ಕೆಲ್ಲಾ ಶಾಶ್ವತ ಪರಿಹಾರೋಪಾಯಕ್ಕಾಗಿ ಚಿಂತನೆಗಿಳಿಯಲು ಇದು ಸಕಾಲ. ಯಾವುದೇ ವ್ಯವಸ್ಥೆ ದೀರ್ಘಾವಧಿಯವರೆ ಬದಲಾವಣೆಗಳಿಲ್ಲದೇ ಮುಂದುವರಿದಿದ್ದೆ ಆದಲ್ಲಿ ಲೋಪದೋಷಗಳು, ಕೊರತೆಗಳು ನುಸುಳುವುದು ಸಾಮಾನ್ಯ. ಪ್ರಶ್ನೆ ಪತ್ರಿಕೆಯ ಸೋರಿಕೆ ಅವಾಂತರವೆನ್ನುವುದು ಇಂದು ನಿನ್ನೆಯ ಸಮಸ್ಯೆಯಲ್ಲ. ಪ್ರಶ್ನೆ ಪತ್ರಿಕೆಗಳನ್ನು ಸಂಬಂಧ ಪಟ್ಟ ಶಿಕ್ಷಣ ಸಂಸ್ಥೆಗಳಿಗೆ ರವಾನಿಸುವ ವಿಧಾನ ಹಲವು ವರ್ಷಗಳಿಂದ ಬದಲಾಗದೆ ಹಾಗೆ ಮುಂದುವರಿದಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಎಲ್ಲಿ ಯಾವ ಹಂತದಲ್ಲಿ  ಆಗುತ್ತದೆಂಬುದನ್ನು ಪತ್ತೆಹಚ್ಚಿ ನಿಯಂತ್ರಿಸುವ ಕ್ರಮ ಆಗಬೇಕು. ಎಲ್ಲಾ ಕ್ಷೇತ್ರಗಳಲ್ಲಿ ಇಂದು ತಂತ್ರಜ್ಞಾನಗಳ ಬಳಕೆ ಹಾಸು ಹೊಕ್ಕಾಗಿದ್ದು ಪರೀಕ್ಷಾ ಮಂಡಳಿಗಳು ಪರೀಕ್ಷಾ ಪದ್ದತಿಯಲ್ಲಿ ತಂತ್ರಜ್ಞಾನವನ್ನು ಸಮರ್ಥವಾಗಿ, ಪರಿಣಾಮಕಾರಿಯಾಗಿ ಬಳಸಿಕೊಳ್ಳುವತ್ತ ಗಮನವಹಿಸಬೇಕಿದೆ. ತಂತ್ರಜ್ಞಾನದ ನೆರವಿನಿಂದ ಪರೀಕ್ಷೆಗಳನ್ನು ಹೇಗೆ ಸುಲಲಿತವಾಗಿ ನಡೆಸಬಹುದು ಎಂಬುದಕ್ಕೆ ರಾಜೀವ್ ಗಾಂಧಿ ವಿಜ್ಞಾನ ವಿಶ್ವ ವಿದ್ಯಾಲಯ ಉತ್ತಮ ಉದಾಹರಣೆ. ಅಲ್ಲಿ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷೆಗೆ ಒಂದು ಅಥವಾ  ಎರಡು ಗಂಟೆ ಮುಂಚಿತವಾಗಿ ಆನ್‍ಲೈನ್ ಸರ್ವರ್ ಮೂಲಕ ಪ್ರಶ್ನೆ ಪತ್ರಿಕೆಗಳನ್ನು ಕಳುಹಿಸಿಕೊಡಲಾಗುತ್ತದೆ, ಸೋರಿಕೆಗೆ ಅವಕಾಶವಿಲ್ಲದಂತಾಗಿದೆ.
            ಮಾನ್ಯ ಶಿಕ್ಷಣ ಸಚಿವರೇ.., ಖಾಸಗಿಯಾಗಿ ಎದ್ದು ನಿಂತಿರುವ ಶಿಕ್ಷಣ ಸಂಸ್ಥೆಗಳು ಶಾಪಿಂಗ್ ಮಾಲ್‍ಗಳಾಗಿ ಬೆಳೆಯುತ್ತಿವೆ. ತೀರಾ ಸಾಮಾನ್ಯ ಬಡವನಿಗೆ ಒಳಗೆ ಎಂಟ್ರಿಯೇ ಇಲ್ಲದಂತಾಗಿದೆ ಈ ಬಗ್ಗೆಯೂ ನಿರ್ಣಯ ತೆಗೆದುಕೊಳ್ಳದೇ ಹೋದರೆ ಮುಂದೊಂದು ದಿನ ಶಿಕ್ಷಣವೆನ್ನುವುದು ದುಡ್ಡಿರುವವರಿಗೆ ಮಾತ್ರಾ ಲಭ್ಯ ಎನ್ನುವಂತಾಗದೆ ಇರದು. ಶಿಕ್ಷಣದ ಹೆಸರಲ್ಲಿ ವ್ಯಾಪಾರಿಕರಣವಾಗುತ್ತಿರುವುದನ್ನು ಮೊದಲು ನಿಲ್ಲಿಸಿ, ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೆತ್ತಿಕೊಳ್ಳಿ. ಉಳಿದಿರುವ ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಿ, ಅನಾವಶ್ಯಕವಾಗಿ ಸಮಯ ಹಾಳು ಮಾಡುವ ವೆಸ್ಟೇಡ್ ಅಧಿಕಾರಿಗಳನ್ನು ಕೆಳಗಿಳಿಸಿ, ನಿಷ್ಠಾವಂತರನ್ನು ನೇಮಕ ಮಾಡಿ...
                                  
             ಶಿಕ್ಷಣ ಇಲಾಖೆಯಲ್ಲಿನ ಆಂತರಿಕ ಗೊಂದಲಗಳು, ವರ್ಗಾವಣೆ ವಿವಾಧಗಳು ಸಾಮಾಜಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ    ಬೀರುತ್ತಿದ್ದು, ಒಟ್ಟಾರೆ ದುರ್ಬಲ ವ್ಯವಸ್ಥೆಯೇ ಹಲವು ತೆರನಾದ ಸಮಸ್ಯೆಗಳಿಗೆ ಗುರಿಯಾಗಿದೆ. ಶಿಕ್ಷಣ ವ್ಯಾಪಾರೀಕರಣವಾಗಿದೆ, ಮಾರಿಕೊಳ್ಳುವ ಸಂತೆಯಾಗಿದೆ ಈ ಬಗ್ಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಬೇಕಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿನ  ಸಣ್ಣ ಪುಟ್ಟ ಲೋಪವೂ ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆಂಬುದನ್ನು ಸಂಬಂದಪಟ್ಟವರು ಮರೆಯದಿರಲಿ... ವಿದ್ಯಾರ್ಥಿ ಹಾಗೂ ಶಿಕ್ಷಣಕ್ಕಿರುವ ಮೌಲ್ಯ ಎಲ್ಲರೂ ಅರಿಯಲಿ...




No comments:

Post a Comment