Friday 5 May 2017

ಗೋಲ್ಡನ್ ಸಿಂಗರ್ ಸೋನುನಿಗಮ್...


ಹೌದು... ನಿಜಕ್ಕೂ ಆತ ಗೋಲ್ಡನ್ ಸಿಂಗರ್...
ಖ್ಯಾತ ಗಾಯಕ ಸ್ವರಮಾಂತ್ರಿಕ ಎಸ್.ಪಿ.ಬಿ ಹೇಳಿದಂತೆ ಆತನದ್ದು ದೇವರ ಸ್ವರ... ಅವನಿಗದು ದೇವರು ಕೊಟ್ಟ ವರ...


       ಆತನೊಬ್ಬ ಗಾಯಕ, ನಟ, ಸಂಗೀತ ನಿರ್ದೇಶಕ, ಟೆಲಿವಿಷನ್ ಪ್ರಸೆಂಟರ್, ರೇಡಿಯೋ ಜಾಕಿ, ಕಾರ್ಯಕ್ರಮ ನಿರೂಪಕ... ಅಬ್ಬಾಬ್ಬಾ!.. ಪಟ್ಟಿ ಮಾಡಿದರೆ ಎಲ್ಲದರಲ್ಲೂ ಕೈ ಆಡಿಸಿ ಸೈ ಎನಿಸಿಕೊಂಡ ಮಹಾನ್ ಪ್ರತಿಭಾವಂತ. ಹಿಂದಿ, ಪಂಜಾಬಿ, ಕನ್ನಡ, ಬಂಗಾಳಿ, ತೆಲುಗು, ತಮಿಳು, ಮರಾಠಿ, ಮಲಯಾಳಂ ಹೀಗೆ ಹತ್ತು ಹಲವು ಭಾಷೆಗಳಲ್ಲಿ ಹಾಡಿ ಸೈ ಎನಿಸಿಕೊಂಡಿರುವ ಹಿನ್ನೆಲೆ ಮಾಂತ್ರಿಕ. ಅನೇಕ ವರ್ಷಗಳ ಹಿಂದೆಯೇ ಕನ್ನಡಕ್ಕೆ ಬಂದು, ತನ್ನ ಗಾನ ಸುಧೆಯನ್ನು ಹರಿಬಿಟ್ಟಿದ್ದರೂ, ಅಪ್ಪಟ ಮನೆ ಮನೆಯ-ಮನಮನದ ಹುಡುಗ ಆಗಿ ಹಾಡಿನ ಮಳೆಯಲ್ಲಿ ಪ್ರತಿ ಕನ್ನಡಿಗನ ಸೋನ ಆಗಿದ್ದು, ‘ಮುಂಗಾರು ಮಳೆ’ ಚಿತ್ರದ ‘ಅನಿಸುತಿದೆ ಯಾಕೋ ಇಂದು’ ಎಂದು ಹಾಡಿದ ಮೇಲೆಯೇ... ಅವನೇ ನನ್ನ ನೆಚ್ಚಿನ, ನನ್ನ ಜೀವನದ ಅತ್ಯಮೂಲ್ಯವಾದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಒಬ್ಬರಾದ, ನನ್ನ ಇಂದಿನ ಹಾಡುಗಾರಿಕೆಗೆ, ಸಂಗೀತಕ್ಕೆÉ ಸ್ಫೂರ್ತಿಯ ಚಿಲುಮೆಯಾದ ಗಾಯಕ ಸೋನು ನಿಗಮ್.

ಚಿಕ್ಕಂದಿನಿಂದಲೂ ಕಾರ್ಯಕ್ರಮದಲ್ಲಿ, ಟಿ.ವಿ ಶೋಗಳಲ್ಲಿ ಹಾಡುತ್ತಿದ್ದ ಸೋನು ಕೇವಲ ಹಾಡುಗಾರಿಕೆಯಲ್ಲಿ ಮಾತ್ರವಲ್ಲದೇ ಬಗೆ ಬಗೆಯ ಕೇಶವಿನ್ಯಾಸ, ಡ್ರೆಸ್‍ಕೋಡ್, ಇತ್ಯಾದಿಗಳಲ್ಲಿ ಸದಾ ಸುದ್ದಿ ಮಾಡುತ್ತಲೇ ಬಂದವರು. ಅದರಂತೆ ಮೊನ್ನೆ ಮೊನ್ನೆಯೂ ಹೊಸತೊಂದು ನಡೆ-ನುಡಿಯಿಂದ ಸುದ್ದಿಯಾದರು ಎನ್ನುವ ವಿಶೇಷವೇ ಈ ಅಂಕಣ ಬರೆಯಲು ಕಾರಣ.
‘ದೇವ್ರು ಎಲ್ಲರÀನ್ನು ಹರಸ್ತಾನೆ, ನಾನು ಮುಸ್ಲಿಂ ಅಲ್ಲ. ಮುಂಜಾನೆ ಕೇಳುವ ಅಜಾನ್ (ದಿನಕ್ಕೆ 5 ಬಾರಿ ಪ್ರಾರ್ಥನೆ ಮಾಡುವುದಕ್ಕಾಗಿ ಇಸ್ಲಾಂ ಧರ್ಮೀಯರನ್ನು ಎಚ್ಚರಿಸುವ ಮಸೀದಿಯ ಕರೆ) ಯಿಂದಾಗಿ ಪ್ರತಿನಿತ್ಯ ಬೇಗ ಎಚ್ಚರಗೊಳ್ಳುವಂತಾಗಿದೆ. ಭಾರತದಲ್ಲಿ ಇಂತಹ ಬಲವಂತವಾಗಿ ಧಾರ್ಮಿಕತÉ ಹೇರುವ ಪರಿಪಾಠ ಕೊನೆಗೊಳ್ಳುವುದು ಎಂದು’!!.

‘ಇಸ್ಲಾಂ ಧರ್ಮ ಸ್ಥಾಪನೆಯಾದಾಗ ವಿದ್ಯುತ್‍ಚ್ಚಕ್ತಿಯನ್ನು ಇನ್ನೂ ಕಂಡು ಹಿಡಿದಿರಲಿಲ್ಲ. ಎಡಿಸನ್ ಅವರ ಸಂಶೋಧನೆಯ ಬಳಿಕ ನಾನೇಕೆ ಈ ಧ್ವನಿ ಕೇಳಬೇಕು’...

‘ನಾಸ್ತಿಕರನ್ನು ಎಬ್ಬಿಸುವುದಕ್ಕಾಗಿ ವಿದ್ಯುತ್‍ಚ್ಚಕ್ತಿ ಬಳಸುವ ಯಾವುದೇ ದೇವಸ್ಥಾನ ಅಥವಾ ಗುರುಧ್ವಾರಗಳನ್ನು ನಾನು ನಂಬುವುದಿಲ್ಲ... ಯಾಕೆ ನಂಬಬೇಕು!?, ನಿಜವಲ್ಲವೇ.!?
ಹೀಗೆ ಸರಣಿ ಟ್ವೀಟ್‍ಗಳನ್ನು ಮಾಡುವ ಮೂಲಕ ದೇಶದ ಗಮನ ಸೆಳೆದ ದಿಟ್ಟತನ ಮೆರೆದ ಗಾಯಕನ ಈ ಸಮಾಚಾರವನ್ನು ಬರೆಯಬೇಕಿನಿಸಿತು ಅದಕ್ಕಾಗಿ ಬರೆಯುತಿರುವೆ ಅದರ ಜೊತೆ ಅವರ ಪೂರ್ಣ ಜೀವನದ ಸಣ್ಣ ಪರಿಚಯವೂ ಇದರಲ್ಲಿಡುವ ಪ್ರಯತ್ನ ಮಾಡಿರುವೆ. 

ಈ ಮೇಲಿನ ಟ್ವೀಟ್ ಹೊರಬಿದ್ದಾಗ ನನ್ನೊಳಗೇನು ಗೊಂದಲವಾಗಲಿಲ್ಲ, ಕೋಮುಗಲಭೆಗೆ ಸ್ಫೂರ್ತಿಯಾಗುತ್ತೆ ಎನ್ನುವ ಭಯವೂ ಕಾಣಲಿಲ್ಲ ಕಾರಣ ನಿಜವಾಗಿಯೂ ದಿನನಿತ್ಯ ಅಥವಾ ಹಬ್ಬ ಹರಿದಿನಗಳಲ್ಲಿ ಮನಬಂದಂತೆ ಬೊಬ್ಬಿರಿಯುವ ಎಲ್ಲಾ ಮತಬಾಂಧವರೂ ಇದರ ಬಗ್ಗೆ ಗಮನ ಹರಿಸಬೇಕು ಅನಿಸಿತು. ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿರುವಂತಹ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದಕ್ಕೊಂದು ಎಲ್ಲೆಯೂ ಇದೆ ಎಂಬುದನ್ನು ನೆನಪಿಸುವ ಆಶಯ  ಅವರ ಸಂದೇಶದಲ್ಲಿ ಎದ್ದು ಕಂಡಿದ್ದನ್ನು ನಾನಂತೂ ಗ್ರಹಿಸಿಕೊಂಡೆ. ಇದನ್ನು ಪ್ರತಿಯೊಬ್ಬನು ಮನವರಿಕೆ ಮಾಡಿಕೊಳ್ಳಬೇಕಾದ ಅವಶ್ಯಕತೆಯೂ ಇಂದು ನಮ್ಮ ಮುಂದಿದೆ. ನಟಿ ಕಂಗನಾ, ನಟ ಸೈಫ್ ಅಲಿ ಖಾನ್‍ರವರು ತಮ್ಮ ಪ್ರೀತಿ ಪಾತ್ರರು, ಪಂಗಡವರಿಗಾಗಿ ಸೋನು ಹೇಳಿದ್ದು ತಪ್ಪೆಂದು ವಿರೋಧ ವ್ಯಕ್ತಪಡಿಸಿದರೂ, ಟ್ವೀಟ್‍ನಲ್ಲಿ ಅವರು ಬಳಸಿದ ಭಾಷೆ ಹಾಗೂ ತರ್ಕಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ಅದೇ ಪ್ರಮಾಣದ ಶ್ಲಾಘನೆಯೂ ಸಿಕ್ಕಿರುವುದು ಮತ್ತೊಂದು ವಿಶೇµವಾಯಿತು.

ಮುಂದೆ, ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಬಗ್ನಾನ್ ಎಂಬಲ್ಲಿನ ಖಾನ್ಕಾ ಷರೀಫ್Àನ ಧಾರ್ಮಿಕ ಮುಖ್ಯಸ್ಥ ಸೈಯದ್ ಷಾ ಅತೇಫ್ ಅಲಿ ಅಲ್ ಖಾದ್ರಿ ಫತ್ವಾ ಹೊರಡಿಸಿ ಸೋನು ನಿಗಮ್ ಕೇಶ ಮುಂಡನ ಮಾಡಿದವರಿಗೆ  10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದರು. ಈ ಸವಾಲನ್ನು ಸ್ವೀಕರಿಸಿದ ಸೋನು ಅವರೇ ಕೂಡಲೇ ತಮ್ಮ ಕೇಶ ವಿನ್ಯಾಸಗಾರ ಹಕೀಮ್ ಅಲೀಮ್ ಅವರನ್ನು ಕರೆಸಿಕೊಂಡು ಕೇಶ ಮುಂಡನ ಮಾಡಿಸಿಕೊಂಡರು. ‘ನಾನೊಬ್ಬ ಹಿಂದೂ, ನನ್ನ ಕೇಶ ಮುಂಡನ ಮಾಡಿದ ವ್ಯಕ್ತಿ ಮುಸ್ಲಿಮ್. ಇಲ್ಲಿ ಶತ್ರುತ್ವ ಎಲ್ಲಿ ಬಂತು!? ಫತ್ವಾದ ಭಾಷೆಗೆ ‘ಪ್ರೀತಿ’ಯ ಭಾಷೆಯಲ್ಲಿ ಉತ್ತರ ನೀಡಿರುವೆ. ಮೌಲ್ವಿ 10 ಲಕ್ಷ ರೂಪಾಯಿ ಸಿದ್ಧ ಪಡಿಸಿಕೊಳ್ಳಲಿ’ ಎಂದರು. ಈ ನಡೆ ನುಡಿ ನೋಡಿ ಜನ ದಿಗ್ಭ್ರಮೆಗೊಂಡು ವಿಷಯ ಇಡೀ  ರಾಷ್ಟ್ರವ್ಯಾಪಿ ಸುದ್ದಿಗೊಂಡಿತು. ಆದರೆ ಸೈಯದ್ ಷಾ ಅತೇಫ್ ಅಲಿ ಅಲ್ ಖಾದ್ರಿ ಅವರು ಇಮಾಮ್ ಅಥವಾ ಮೌಲಾನಾ ಅಲ್ಲ. ಅವರಿಗೆ ಧಾರ್ಮಿಕವಾಗಿ ಯಾವುದೇ ಅಧಿಕಾರವಿಲ್ಲ ಎಂಬ ವಿಷಯ ಆ ಬಳಿಕ ಬಹಿರಂಗವಾಯಿತು. ಅದೇನೆ ಇರಲಿ, ಇದ್ದು ಬೀಗಲಿ ಆದರೆ ಗಾಯಕನೊಬ್ಬನ ವಿಷಯ ಸ್ಫಷ್ಟತೆ, ಮಾತಿನ ಮೇಲೆ ಅವರಿಗಿರುವ ಪ್ರಭುದ್ಧತೆ, ಬದ್ಧತೆ ಮತ್ತು ಅಭಿವ್ಯಕ್ತತತೆಯ ಆಳತೆ ಎದ್ದು ಕಾಣುವುದನ್ನು ಪ್ರತಿಯೊಬ್ಬರೂ ಅಭಿನಂದಿಸಲೇಬೇಕು. ಒಂದು ದಾರ್ಮಿಕತೆಯ ಬಂಡಾಯ ಸಾರಲು ಕೂಗಿ  ಎಲ್ಲ ನಿಶ್ಯಬ್ಧದದ ಪರಿಸರದಲ್ಲಿ ಚೀರಾಟದ ನಡುವೆ ಮೌನ ಒಡೆಯಬೇಕಿಲ್ಲ. ಹಿಂದೂ ಸಂಸ್ಕøತಿ ಹೇಳುವಂತೆ ಧ್ಯಾನವೇ ದೇವರನ್ನು ಒಲಿಸಿಕೊಳ್ಳುವ ಮಾರ್ಗ. ಧ್ಯಾನವೆಂದರೆ ಮೌನತ್ವದಿಂದ ನಿಶ್ಯಬ್ಧರಾಗಿ ಮನಸಿನಾಳದ ಆಲಾಪನೆಗೆ ಕೂತು ದೇವರನ್ನು ಭಜಿಸುವುದು ಆದರೆ ಈ ಅಜಾನ್‍ನಲ್ಲಿ ಯಾಕೇ ಮೈಕ್‍ನ ಕೂಗೇ ಹೆಚ್ಚು ಪ್ರಾಮುಖ್ಯವಹಿಸುತ್ತೋ ತಿಳಿದಿಲ್ಲ!.

ಹಾಡಿನಲ್ಲಿ ಕನ್ನಡದ ಜನತೆ ಸೋನು ನಿಗಮ್‍ರನ್ನು ಯಾವಾಗಲೋ ಮೆಚ್ಚಿಕೊಂಡಿತ್ತು. ‘ಮುಂಗಾರು ಮಳೆ’ ಚಿತ್ರದಲ್ಲಿ ಅವರ ಗಾಯನ ಕೇಳಿ ಮಿಂದೆದ್ದ ಕನ್ನಡಿಗರು ಇಂದಿಗೂ ಅವರ ಹಾಡುಗಳೆಂದರೆ ಕಿವಿ ನಿಮಿರಿಕೊಂಡು ಕೇಳಿ ಸಂತಸಪಡುತ್ತಾರೆ. ಗಾಂಧೀನಗರದುದ್ದಕ್ಕೂ ಸಿನಿಮಾ ಸೆಟ್ಟೇರುವಾಗಲೇ ಸೋನು ನಿಗಮ್‍ರಿಂದ ಒಂದು ಹಾಡು ಹಾಡಿಸಿ ಅಂತ ಅದೆಷ್ಟೋ ಪ್ರೋಡ್ಯೂಸರ್‍ಗಳು ಸಂಗೀತ ನಿರ್ದೇಶಕರಿಗೆ ಹೇಳಿಯೇ ತೀರುವ ಎಷ್ಟೋ ಉದಾಹರಣೆಗಳಿವೆ. ಸೋನು ನಿಗಮ್‍ರ ಹಾಡಿಗೆ ಸುರಿಯುವ ಅಷ್ಟೂ ದುಡ್ಡು ವಾಪಾಸ್ಸು ಬಂದೇ ಬರುತ್ತೆ ಎನ್ನುವ ನಂಬಿಕೆ ಈಗಲೂ ಹಾಗೆಯೇ ಇದೆ. ಜಯಂತ್ ಕಾಯ್ಕಿಣಿಯಂತ ಉತ್ತಮ ಸಾಹಿತಿಯ ಬರವಣಿಗೆಗಳಿಗೆ ಧ್ವನಿಗೂಡಿಸಿದರಂತೂ ಸತ್ವವಿಲ್ಲದ ಸಿನಿಮಾವಾದರೂ ಅದನ್ನು ಹಾಡಿನಲೆಯಲ್ಲೇ ಗೆಲ್ಲಿಸುವ ತಾಕತ್ತು ಅವರ ಕಂಠಕ್ಕಿದೆ. ಅದಕ್ಕಾಗಿಯೇ ಕರ್ನಾಟಕದ ಜನತೆ ಅವರಿಗೆ ‘ಗೋಲ್ಡನ್ ಸ್ಟಾರ್ ಸಂಗೀತಗಾರ’ ಎಂಬ ಬಿರುದನ್ನು ನೀಡಿ ಗೌರವಿಸಿದೆ. ಜುಲೈ 30 1973ರಲ್ಲಿ ಹರಿಯಾಣದ ಫರಿದಾಬಾದ್‍ನಲ್ಲಿ ಜನಿಸಿದ ಇವರು ತಂದೆ ಆಗಂ ಕುಮಾರ್ ನಿಗಮ್‍ರಿಂದಲೇ ಸಂಗೀತಾಭ್ಯಾಸವನ್ನು ಬಳುವಳಿಯಾಗಿ ಪಡೆದವರು. ಸಣ್ಣ ಪುಟ್ಟ ಕಾರ್ಯಕ್ರಮದಲ್ಲಿ ಹಾಡುತ್ತಿದ್ದ ಸೋನುಗೆ 1990ರಲ್ಲಿ ‘ಜಾನಮ್’ ಎಂಬ ಸಿನಿಮಾದಲ್ಲಿ ಮೊದಲಬಾರಿಗೆ ಹಾಡುವ ಅವಕಾಶ ಸಿಕ್ಕರೂ ದುರಾದೃಷ್ಟವಶಾತ್ ಆ ಸಿನಿಮಾ ಅಧಿಕೃತವಾಗಿ ತೆರೆಕಾಣಲಿಲ್ಲ. ಆನಂತರ 1992ರಲ್ಲಿ ತೆರೆಕಂಡ ‘ಆಜಾ ಮೇರಿ ಜಾನ್’ ಸಿನಿಮಾದಲ್ಲಿ ‘ಓ ಆಸ್ಮಾನ್ ವಾಲೇ’  ಹಾಡು ಸೋನು ಅವರ ಮೊದಲ ಹಾಡೆನಿಸಿತು. ಅಲ್ಲಿಂದ ಪ್ರಾರಂಭವಾದ ಜರ್ನಿ 1997ರಲ್ಲಿ ಅನು ಮಲಿಕ್ ಸಂಗೀತ ನಿರ್ದೇಶನದಲ್ಲಿ ‘ಬಾರ್ಡ್‍ರ್’ ಸಿನಿಮಾದ ‘ಸಂದೇಸೆ ಆತೇ ಹೈ’ ಹಾಡನ್ನು ಹಾಗೂ ‘ಪರ್ದೇಸೆ’ ಚಿತ್ರದ  ‘ಯೇ ದಿಲ್ ಹೈ ದೀವಾನ’ ಹಾಡನ್ನು ಹಾಡಿ ಜನಮೆಚ್ಚುಗೆ ಪಡೆದರು. ಮೊದಮ್ಮದ್ ರಫೀ ಅವರ ಹಾಡುಗಳ ಸಂಗ್ರಹ ‘ ರಫೀ ಕೀ ಯಾದೇ’ ಸೇರಿ ಒಟ್ಟು 100 ಹಾಡುಗಳ ಆರು ಡಿಸ್ಕ್‍ಗಳನ್ನು ‘ಕಲ್ ಆಜ್ ಜೌರ್ ಕಲ್’ ಶೀರ್ಷಿಕೆಯಲ್ಲಿ ಸಪ್ಟೆಂಬರ್ 2007ರಲ್ಲಿ ಬಿಡುಗಡೆ ಮಾಡಿದ್ದು ಅವರ ವೃತ್ತಿ ಬದುಕಿನ ಮಹಾನ್ ಸಾಧನೆಗಳಲ್ಲೊಂದು.

    ಇನ್ನೂ ಹಾಡುಗಾರಿಕೆಯಲ್ಲಿ ಕನ್ನಡಕ್ಕೆ ಅವರ ಕೊಡುಗೆಗಳನ್ನು ಗಮನಿಸಿದರೆ 1996ರಲ್ಲಿ ವಿಷ್ಣುವರ್ಧನ್ ಅವರ ‘ಜೀವನದಿ’ ಸಿನಿಮಾದಲ್ಲಿ ‘ಎಲ್ಲೋ ಯಾರೋ ಹೇಗೋ’ ಹಾಡಿನ ಮೂಲಕ ಸ್ಯಾಂಡಲ್ ವುಡ್ ಜರ್ನಿ ಪ್ರಾರಂಭಿಸಿ ಇದುವರೆಗೂ 600ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದು ಒಂದಕ್ಕಿಂತ ಒಂದು ಅಂದವಾಗಿ, ಭಿನ್ನವಾಗಿವೆ. ಬಾಲಿವುಡ್ ಬಿಟ್ಟರೆ ವೃತ್ತಿ ಬದುಕಲ್ಲಿ ಹೆಚ್ಚು ಹಾಡಿದ್ದು ಕನ್ನಡದ ಹಾಡುಗಳೇ ಎನ್ನುವುದು ನಮ್ಮ ಹೆಮ್ಮೆ ಹಾಗೂ ಅವರ ವಿಶೇಷತೆ. ಇಂದಿಗೂ ‘ಸ್ನೇಹಲೋಕ’ ಚಿತ್ರದ ‘ಟೈಟಾನಿಕ್ ಹೀರೋಯಿನ್ ನನ್ನ ಚೆಲುವೆ’, ‘ಗಟ್ಟಿಮೇಳ’ ಚಿತ್ರದ ‘ಹಂಸವೇ ಹಂಸವೇ’, ‘ಮುಂಗಾರು ಮಳೆಯ’ ‘ಅನಿಸುತಿದೆ ಯಾಕೋ ಇಂದು’, ‘ಮಿಲನ’ ಚಿತ್ರದ ‘ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ’... ಸೇರಿದಂತೆ ಸಿನಿಪ್ರಿಯರು ಆಯಸ್ಸು ಇರುವವರೆಗೂ ಗುನುಗುನಿಸುವಷ್ಟು ಅಂದದ ಹಾಡುಗಳನ್ನು ಕೊಟ್ಟಿರುವುದು ಸೋನು ನಿಗಮ್‍ರಿಂದ ನಮಗೆ ಸಿಕ್ಕಿರುವ ಕೊಡುಗೆ.

ಹಿಂದಿಯಲ್ಲಿ ಅನೇಕ ಆಲ್ಭಮ್ ಹಾಡುಗಳ ಮೂಲಕ ಮನೆಮಾತಾಗಿರುವ ಸೋನು ನಿಗಮ್ ವರ್ಷಕ್ಕೊಮ್ಮೆಯಾದರೂ ಒಂದೊಂದು ಹೊಸ ಹೊಸ ಪ್ರಯೋಗಗಳನ್ನು ಜನರ ಮಧ್ಯೆಯೇ ಇದ್ದು ಸಮಾಜಕ್ಕೆ ಒಳ್ಳೆಯದನ್ನು ಸಾರುತ್ತಲೇ ಇರುತ್ತಾರೆ. ಹಿಂದೆ ಭ್ರಷ್ಟಾಚಾರದ ವಿರುದ್ಧವಾಗಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ನಡೆದಾಗಲೂ ಸೋನು ಸತ್ಯಾಗ್ರಹದಲ್ಲಿ ಭಾಗವಹಿಸಿ ದೇಶದ ಕಳಕಳಿಗೆ ಭಾಜನರಾಗಿದ್ದರು. ಅಲ್ಲದೇ ಕಳೆದ ಬೇಸಿಗೆಯ ಒಂದು ಘಟನೆಯನ್ನು ನಿಮಗೆ ನಾನು ಹೇಳಲೆಬೇಕು. ಸೋನು ನಿಗಮ್  ತಮ್ಮ ಯೂ ಟ್ಯೂಬ್‍ಗೆ ‘ದ ರೋಡ್ ಸೈಡ್ ಉಸ್ತಾದ್’ ಎಂಬ ಹಣೆಪಟ್ಟಿಯ ಆರು ನಿಮಿಷದ ವಿಡಿಯೋ ಅಪ್ಲೋಡ್ ಮಾಡಿದ್ದರು. ಅದರಲ್ಲಿ ಅವರು ಮುಂಬೈನ ವಿವಿಧ ರಸ್ತೆ ಬದಿಯಲ್ಲಿ ಮಾಸಿದ ಬಟ್ಟೆ ತೊಟ್ಟು ವೃದ್ಧನ ವೇಷದಲ್ಲಿ ಸರಿಸುಮಾರು 25 ಹಾಡುಗಳನ್ನು ಹಾಡಿದ ದೃಶ್ಯವಿತ್ತು. ಈ ಕುರಿತು ಅವರು ಪ್ರತಿಕ್ರಿಯಿಸಿದ ಬಗೆ ನಿಜಕ್ಕೂ ‘ನಾನ್ಯಾರು’ ಎಂಬ ಪ್ರಶ್ನೆಗೆÉ ಸ್ವತಃ ಅವರೇ ಉತ್ತರ ಕಂಡುಕೊಂಡ ಹಾಗಿತ್ತು.

‘ನನ್ನ ಉಡುಗೆ ತೊಡುಗೆಯಷ್ಟೇ ಬದಲಾಗಿತ್ತು. ಹಾಡುಗಾರಿಕೆಯ ಶೈಲಿ, ಧ್ವನಿ ಯಾವುದರಲ್ಲೂ ಬದಲಾವಣೆ ಇರಲಿಲ್ಲ. ಅದಾಗ್ಯೂ ಜನ ನನ್ನನ್ನು ಗುರುತಿಸಲಿಲ್ಲ ನನಗದು ದೊಡ್ಡ ಅನುಭವ’ ಎಂದು ಹೇಳಿಕೊಂಡಿದ್ದರು.

ಹೀಗೆ ಒಂದಿಲ್ಲೊಂದು ಬಗೆಯಲ್ಲಿ ಜಾಣ್ಮೆಯಲ್ಲೇ ಉತ್ತರ ನೀಡುವ, ಪ್ರ್ಯಾಕ್ಟಿಕಲ್ ಅನುಭವ ನೀಡುವ, ಒಳ್ಳೆಯ ನಡಿಗೆಯಲ್ಲಿ ಸದಾ ಸುದ್ದಿ ಮಾಡುವ ಸೋನುನಿಗಮ್ ಈ ಬಾರಿ ಅಜಾನ್‍ನ ಬಗ್ಗೆ ಟ್ವೀಟ್ ಮಾಡಿ, ಸೈಯದ್ ಷಾ ಹೇಳಿದ ಮಾತಿನಂತೆ ನಡೆದುಕೊಂಡು, ಮುಜುಗರವಾಗುವಂತೆ ಮಾಡಿ ಸೈ ಎನಿಸಿಕೊಂಡಿರುವ ಅವರ ಅಭಿವ್ಯಕ್ತತೆಯಲ್ಲೂ ಸತ್ವವಿದೆ ಎನ್ನುವುದನ್ನು ಎಲ್ಲಾ ಜನಾಂಗದವರು ಯೋಚಿಸಬೇಕು. ಇನ್ನೊಬ್ಬರಿಗೆ ತೊಂದರೆ ನೀಡುವ ದೇವರನ್ನು ಕೂಗುವ ಶಬ್ದಮಾಲಿನ್ಯಕ್ಕೆ ಕಡಿವಾಣ ಹಾಕಬೇಕು... ಈ ಬಗ್ಗೆ ಚಿಂತನೆ ನಡೆಯಬೇಕು...
ಏನಂತೀರಾ!?...

No comments:

Post a Comment